ಶ್ರೀ ಹಸ್ತಿಕೇರಿ ಮಠ, ತಲಕಾಡು

ವಿಳಾಸ:

ಷ.ಬ್ರ.ಸ್ವ ಶ್ರೀ ಸಿದ್ದಮಲ್ಲಿಕಾರ್ಜುನ ಸ್ವಾಮಿಗಳವರು, ಶ್ರೀ ಹಸ್ತಕೇರಿ ಮಠ, ತಲಕಾಡು, ಟಿ.ನರಸೀಪುರ ತಾಲ್ಲೂಕು, ಮೈಸೂರು ಜಿಲ್ಲೆ
ಮೊ. +91

ಮಠದ ವಿವರ:

ಹಸ್ತಿ ಕೇರಿಮಠಃ ಕಾವೇರಿ ನದಿಯ ದಡದಲ್ಲಿ ತಲಕಾಡಿನ ದಕ್ಷಿಣ ಭಾಗದಲ್ಲಿ ಸ್ಥಾಪನೆಯಾಗಿರುವ ಮಠ. ಇದು ಗಂಗರ ಕಾಲದಿಂದಲೂ ಅಸ್ತಿತ್ವದಲ್ಲಿದೆ ಎಂದು ತಿಳಿದುಬಂದಿದೆ. ರಾಜರ ಆನೆಗಳನ್ನು ಕಟ್ಟುತ್ತಿದ್ದ ಬೀದಿಯಲ್ಲಿ ಇದ್ದ ಕಾರಣ “ಹಸ್ತಿಕೇರಿ ಮಠ” ಎಂಬ ಹೆಸರು ಬಂದಿದೆ. ಈ ಮಠ ಉಜ್ಜಯಿನಿ ಪೀಠದ ಶಾಖಾ ಮಠವಾಗಿದೆ.ಮಠದ ಮೂಲಪುರುಷರಾದ ಶ್ರೀ ಕರಿಬಸವೇಶ್ವರರ ಗದ್ದುಗೆಯು ಕ್ರಿ.ಶ. 1592 ರಲ್ಲಿ ನಿರ್ಮಾಣವಾಯಿತು. ೧೯೬೦ ರಲ್ಲಿ ನೂತನ ಕಟ್ಟಡ ನಿರ್ಮಿಸಿ ಶ್ರೀ ಡಾ. ಸಿದ್ಧಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳಿಗೆ ಪಟ್ಟಾಧಿಕಾರ ಮಾಡಲಾಯಿತು. ಇವರು ಆಯುರ್ವೇದ ಮತ್ತು ಹೋಮಿಯೋಪತಿಯಲ್ಲಿ ಪರಿಣತಿ ಹೊಂದಿದ್ದು, ಮಠದಲ್ಲಿ ವೈದ್ಯಕೀಯ ಸೇವೆಯ ಜೊತೆಗೆ ಧಾರ್ಮಿಕ ಸೇವೆ ಸಲ್ಲಿಸುತ್ತಿದ್ದಾರೆ.

ಪರಂಪರೆ:

  • ಷ.ಬ್ರ.ಸ್ವ ಶ್ರೀ ಕರಿಬಸವೇಶ್ವರ ಶಿವಾಚಾರ್ಯಸ್ವಾಮಿಗಳು
  • ಷ.ಬ್ರ.ಸ್ವ ಶ್ರೀ ಮಹಾಂತ ಶಿವಾಚಾರ್ಯಸ್ವಾಮಿಗಳು
  • ಷ.ಬ್ರ.ಸ್ವ ಶ್ರೀ ಸಿದ್ಧಲಿಂಗ ಶಿವಾಚಾರ್ಯಸ್ವಾಮಿಗಳು
  • ಷ.ಬ್ರ.ಸ್ವ ಶ್ರೀ ಡಾ. ಸಿದ್ಧಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮಿಗಳು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

ಮಠದಲ್ಲಿ ನಿತ್ಯಪೂಜೆಯ ಜೊತೆಗೆ ವರ್ಷದಲ್ಲಿ ಒಮ್ಮೆ ಗುರುಗಳ ಆರಾಧನೆ, ಜ್ಞಾನ ಮತ್ತು ಅನ್ನದಾಸೋಹ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿವೆ.

ಸಾಮಾಜಿಕ ಕಾರ್ಯಗಳು:

ಮಠದಲ್ಲಿ ವಿದ್ಯಾರ್ಥಿ ನಿಲಯ ಸ್ಥಾಪಿಸಲಾಗಿದೆ. ಸರ್ಪವಿಷ ವೈದ್ಯತೆಯಲ್ಲಿ ಪ್ರೌಢಿಮೆಯನ್ನು ಹೊಂದಿರುವ ಶ್ರೀಗಳು “ವಿಷಪರಿಹಾರೇಶ್ವರ” ಗುಡಿಯೊಂದಿಗೆ “ತಕ್ಷಕ ಆಯುರ್ವೇದ ಚಿಕಿತ್ಸಾಲಯ” ಸ್ಥಾಪಿಸಿದ್ದಾರೆ.