ಶ್ರೀ ಉಕ್ಕಿನಕಂತೆ ಮಠ, ಮಾದಹಳ್ಳಿ

ವಿಳಾಸ:

ಷ.ಬ್ರ.ಸ್ವ ಶ್ರೀ ಸಾಂಬಸದಾಶಿವ ಸ್ವಾಮಿಗಳವರು, ಶ್ರೀ ಉಕ್ಕಿನಕಂತೆ ಮಠ, ಮಾದಹಳ್ಳಿ, ಬನ್ನೀಕುಪ್ಪೆ ಅಂಚೆ , ಹುಣಸೂರು ತಾಲ್ಲೂಕು, ಮೈಸೂರು ಜಿಲ್ಲೆ – 571105
ಮೊ. +919448738895

ಮಠದ ವಿವರ:

ಹುಣಸೂರು ತಾಲ್ಲೂಕಿನ ಮಾದಹಳ್ಳಿಯು ತಾಲ್ಲೂಕು ಕೇಂದ್ರದಿಂದ ಪೂರ್ವಕ್ಕೆ ಹತ್ತು ಕಿ.ಮೀ. ದೂರದಲ್ಲಿದೆ. ಈ ಗ್ರಾಮದ ಆಗ್ನೇಯಕ್ಕೆ ಶ್ರೀ ರಂಭಾಪುರಿ ಪೀಠದ ಶಾಖಾಮಠವಾದ ಶ್ರೀ ಉಕ್ಕಿನ ಕಂತೆ ಮಠವು ಪುರಾತನ ಕಾಲದಿಂದಲೂ ಅಸ್ತಿತ್ವದಲ್ಲಿದ್ದು, ಉಕ್ಕಿನ ಕಂತೆ ಮಠವು ಪುರಾಣ ಪ್ರಸಿದ್ಧಿಯನ್ನು ಪಡೆದಿದೆ. ಕೈಲಾಸದಿಂದ ಧರೆಗಿಳಿದು ಬಂದಿತೆಂದು ಹೇಳಲಾಗುವ ಉಕ್ಕಿನ ಕಂತೆಯು ಇಲ್ಲಿ ಸ್ಥಾಪನೆಯಾಗಿ, ‘ಶ್ರೀ ಉಕ್ಕಿನ ಕಂತೆ ಮಠ’ ಎಂಬ ಹೆಸರು ಬಂದಿದೆ. ಇಲ್ಲಿ ಈಶ್ವರ, ವೀರಭದ್ರ, ಬಸವೇಶ್ವರ, ಉಪ್ಪರಿಗೆಬಸಪ್ಪ, ಬೂದಿಯಪ್ಪ ಮುಂತಾದ ದೇವಾಲಯಗಳು ಸ್ಥಾಪಿತವಾಗಿವೆ.

ಪರಂಪರೆ:

  1. ಷ.ಬ್ರ.ಸ್ವ ಶ್ರೀ ಗುರುಮಲ್ಲಪ್ಪ ಶಿವಾಚಾರ್ಯ ಸ್ವಾಮಿಗಳು
  2. ಷ.ಬ್ರ.ಸ್ವ ಶ್ರೀ ಜಡೆಮಹಾಂತ ಶಿವಾಚಾರ್ಯ ಸ್ವಾಮಿಗಳು
  3. ಷ.ಬ್ರ.ಸ್ವ ಶ್ರೀ ತೋಂಟದಾರ್ಯ ಶಿವಾಚಾರ್ಯ ಸ್ವಾಮಿಗಳು
  4. ಷ.ಬ್ರ.ಸ್ವ ಶ್ರೀ ಸಾಂಬಸದಾಶಿವ ಸ್ವಾಮಿಗಳವರು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

ನಿತ್ಯ ಪೂಜೆಯೊಂದಿಗೆ ಶಿವರಾತ್ರಿಯ ದಿನ ಮಠಕ್ಕೆ ವೀರಭದ್ರಸ್ವಾಮಿಯನ್ನು ಕರೆತರುವ ಉತ್ಸವ ಸಂಪ್ರದಾಯವಾಗಿದೆ.

ಸಾಮಾಜಿಕ ಕಾರ್ಯಗಳು:

ಬಡಮಕ್ಕಳಿಗಾಗಿ ‘ಉಕ್ಕಿನಕಂತೆ ವಿದ್ಯಾರ್ಥಿನಿಲಯ’ ತೆರೆದು ಉಚಿತ ವಸತಿ ಮತ್ತು ಪ್ರಸಾದದ ವ್ಯವಸ್ಥೆಯನ್ನು ಮಾಡಿದೆ.