ವಿಳಾಸ:
ಷ.ಬ್ರ.ಸ್ವ ಶ್ರೀ ಚೆನ್ನಬಸವದೇಶಿಕೇಂದ್ರ ಸ್ವಾಮಿಗಳವರು, ಶ್ರೀ ಸಲೀಲಾಖ್ಯ ಮಠ, ಬೆಟ್ಟದಪುರ, ಪಿರಿಯಾಪಟ್ಟಣ ತಾಲ್ಲೂಕು, ಮೈಸೂರು ಜಿಲ್ಲೆ- 571102 ಮೊ. +919448463445
ಮಠದ ವಿವರ:
ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರವು ತಾಲ್ಲೂಕು ಕೇಂದ್ರದಿಂದ ಉತ್ತರಕ್ಕೆ ಹನ್ನೆರಡು ಕಿ.ಮೀ. ದೂರದಲ್ಲಿದೆ. ಇಲ್ಲಿ ಶ್ರೀ ಚಿಕ್ಕವೀರ ದೇಶಿಕೇಂದ್ರಸ್ವಾಮಿ ಮಠ (ಸಲೀಲಾಖ್ಯ ವಿರಕ್ತಮಠ) ಅಸ್ತಿತ್ವದಲ್ಲಿವೆ. ಮಠವು ಗ್ರಾಮದ ಹೊರಭಾಗದಲ್ಲಿ ಸ್ಥಾಪನೆಯಾಗಿ ಇದೀಗ ಮಧ್ಯಭಾಗದೊಳಗೆ ಸೇರಿಕೊಂಡಿದೆ.
ಪರಂಪರೆ:
- ಷ.ಬ್ರ.ಸ್ವ ಶ್ರೀ ವಿರಕ್ತಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ಚಿಕ್ಕವೀರ ದೇಶಿಕೇಂದ್ರಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ಚನ್ನವೀರ ದೇಶಿಕೇಂದ್ರಸ್ವಾಮಿಗಳು
- ಷ.ಬ್ರ.ಸ್ವ ಶ್ರೀ ಚನ್ನಬಸವ ದೇಶಿಕೇಂದ್ರಸ್ವಾಮಿಗಳು (ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
ಮಠದಲ್ಲಿ ಶ್ರೀ ಚಿಕ್ಕವೀರ ದೇಶಿಕೇಂದ್ರ ಸ್ವಾಮಿಗಳು, ಶ್ರೀ ಚನ್ನವೀರ ದೇಶಿಕೇಂದ್ರ ಸ್ವಾಮಿಗಳು ಮತ್ತು ಎಡೆಯೂರು ಶ್ರೀ ಸಿದ್ಧಲಿಂಗೇಶ್ವರರ ತೋರು ಗದ್ದುಗೆಗಳಿವೆ. ಈ ಗದ್ದುಗೆಗಳಿಗೆ ತ್ರಿಕಾಲ ಪೂಜೆ ನಡೆಸಲಾಗುತ್ತದೆ. ಜೂನ್‌ನಲ್ಲಿ ಪುಣ್ಯಸ್ಮರಣೆ, ಹುಣ್ಣಿಮೆ, ಅಮಾವಾಸ್ಯೆ, ಕಾರ್ತೀಕ, ಶ್ರಾವಣ ಮಾಸಗಳಲ್ಲಿ ವಿಶೇಷ ಪೂಜೆ ಹಾಗೂ ಭಕ್ತರಿಗೆ ಅನ್ನದಾಸೋಹದ ವ್ಯವಸ್ಥೆಯೂ ಇರುತ್ತದೆ.
ಸಾಮಾಜಿಕ ಕಾರ್ಯಗಳು:
ಮಠವು ಮೈಸೂರು ನಗರದಲ್ಲಿ ಸ್ಥಾಪಿಸಿದ ವಿದ್ಯಾರ್ಥಿನಿಲಯವನ್ನು ‘ಶ್ರೀ ಚಿಕ್ಕವೀರಗುರು ಪ್ರಸಾದ ನಿಲಯ’ ಎಂದು ನಾಮಕರಣ ಮಾಡಿದೆ. ಬೆಟ್ಟದಪುರದಲ್ಲಿ ಹಾಗೂ ಪಿರಿಯಾಪಟ್ಟಣ, ಬಸವಪಟ್ಟಣ ಸ್ಥಳಗಳಲ್ಲಿ ಪ್ರೌಢಶಾಲೆಗಳ ಸ್ಥಾಪನೆ, ನರ್ಸಿಂಗ್ ಶಾಲೆ ಪ್ರಾರಂಭಿಸಿ ಗ್ರಾಮೀಣ ಬಡಮಕ್ಕಳಿಗೆ ವಿದ್ಯಾದಾನ ಮಾಡಲಾಗಿದೆ. ಧರ್ಮ ಮತ್ತು ಸಾಹಿತ್ಯದ ಪ್ರಸಾರದ ಜೊತೆಗೆ ಜನಪರ ಕೆಲಸಗಳನ್ನು ನಿರಂತರವಾಗಿ ನಡೆಸಲಾಗಿದೆ.