ಶ್ರೀ ಚಂದ್ರಮೌಳೇಶ್ವರ ಮಠ, ಮಾದಾಪುರ

ವಿಳಾಸ:

ಷ.ಬ್ರ.ಸ್ವ. ಶ್ರೀ ಮಲ್ಲಿಕಾರ್ಜುನಸ್ವಾಮಿಗಳು, ಶ್ರೀ ಚಂದ್ರಮೌಳೇಶ್ವರ ಮಠ, ಮಾದಾಪುರ ಅಂಚೆ, ಹಂಪಾಪುರ ಹೋಬಳಿ, ಹೆಗ್ಗಡದೇವನ ಕೋಟೆ ತಾಲ್ಲೂಕು, ಮೈಸೂರು ಜಿಲ್ಲೆ.
ಮೊ. 8095380695

ಮಠದ ವಿವರ:

ಮಾದಾಪುರವು ಹೆಗ್ಗಡದೇವನಕೋಟೆ ತಾಲ್ಲೂಕಿನ ಪೂರ್ವಕ್ಕೆ ಹತ್ತು ಕಿ.ಮೀ ದೂರದಲ್ಲಿದ್ದು, ೧೯೭೪ ರಲ್ಲಿ ಎಂ.ಎಸ್. ಪುಟ್ಟಸ್ವಾಮಪ್ಪನವರು ಜೀರ್ಣಾವಸ್ಥೆಯಲ್ಲಿದ್ದ ದೇವಸ್ಥಾನಗಳನ್ನು ನವೀಕರಿಸಿ, ನೂತನ ಮಠದ ಕಟ್ಟಡವನ್ನು ನಿರ್ಮಿಸಿದರು. ನಂತರ ಸುತ್ತೂರು ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮಿಗಳ ಆಶೀರ್ವಾದದೊಂದಿಗೆ ೧೯೭೯ರ ನವೆಂಬರ್ ೨೨ ರಂದು ಶ್ರೀ ಚಂದ್ರಮೌಳೇಶ್ವರ ಸ್ವಾಮಿಗಳಿಗೆ ಪಟ್ಟಾಧಿಕಾರ ನೀಡಲಾಯಿತು.೧೯೯೦ರಲ್ಲಿ ಮಠದ ಕಟ್ಟಡ ವಿಸ್ತರಣೆಗೊಂಡಿದ್ದು, ಹೆಬ್ಬಾಗಿಲಿನ ಮೇಲೆ ನಂದಿ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಗಿದೆ.

ಪರಂಪರೆ:

  1. ಷ.ಬ್ರ.ಸ್ವ. ಶ್ರೀ ಚಂದ್ರಮೌಳೇಶ್ವರ ಸ್ವಾಮಿಗಳು
  2. ಷ.ಬ್ರ.ಸ್ವ. ಶ್ರೀ ಮಲ್ಲಿಕಾರ್ಜುನಸ್ವಾಮಿಗಳು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

ಯುಗಾದಿ, ಕಾರ್ತಿಕ, ಶ್ರಾವಣ ಮಾಸ ಅಲ್ಲದೆ ಅಮಾವಾಸ್ಯೆ ಹಾಗೂ ಹುಣ್ಣಿಮೆ ದಿನಗಳಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತದೆ.

ಸಾಮಾಜಿಕ ಕಾರ್ಯಗಳು:

ಶ್ರೀ ಚಂದ್ರಮೌಳೇಶ್ವರ ಸ್ವಾಮಿಗಳ ನೇತೃತ್ವದಲ್ಲಿ ಮಾದಾಪುರದಲ್ಲಿ ಪ್ರಾಥಮಿಕ ಶಾಲೆ, ಸಂಸ್ಕೃತ ಪಾಠಶಾಲೆ ಹಾಗೂ ಪ್ರೌಢಶಾಲೆ ಸ್ಥಾಪಿಸಲಾಗಿದೆ.
ಉಚಿತ ವಿದ್ಯಾರ್ಥಿನಿಲಯದ ವ್ಯವಸ್ಥೆ ಮಾಡಲಾಗಿದ್ದು, ಬಡ ವಿದ್ಯಾರ್ಥಿಗಳಿಗೆ ಊಟ ಹಾಗೂ ವಸತಿಯನ್ನು ನೀಡಲಾಗುತ್ತಿದೆ.