ಶ್ರೀ ಮಠ, ಪುರ

ವಿಳಾಸ:

ಷ.ಬ್ರ.ಸ್ವ. ಶ್ರೀ ಚಂದ್ರಶೇಖರಸ್ವಾಮಿಗಳು, ಶ್ರೀಮಠ, ಪುರ, ಹಂಪಾಪುರ ಪೋಸ್ಟ್, ಹೆಗ್ಗಡದೇವನ ಕೋಟೆ ತಾಲ್ಲೂಕು, ಮೈಸೂರು ಜಿಲ್ಲೆ.
ಮೊ. 9945398237

ಮಠದ ವಿವರ:

ಶ್ರೀ ಮಠವು 1986ರ ಮಾರ್ಚ್ 25 ರಂದು ಶ್ರೀ ಬಸವೇಶ್ವರ ದಾಸೋಹ ಮಠವು ಸ್ಥಾಪನೆಯಾಯಿತು. ಅಂದಿನಿಂದ ಪ್ರತಿನಿತ್ಯ ಬೆಳಿಗ್ಗೆ ಸಂಜೆ ಕಂತೆ ಬಿಕ್ಷೆ ಮಾಡಿ ಮಠಕ್ಕೆ ಬಂದಂತಹ ಭಕ್ತಾದಿಗಳಿಗೆ ಪ್ರಸಾದ ಬಡಿಸುತ್ತಿದ್ದೆವು ಹಾಗೆಯೇ ಪ್ರತಿವರ್ಷ ಶ್ರೀ ಬಸವ ಜಯಂತಿ ಕಾರ್ಯಕ್ರಮವನ್ನು ಗ್ರಾಮಸ್ಥರ ಸಹಕಾರದೊಂದಿಗೆ ಶ್ರೀ ಬಸವೇಶ್ವರ ಭಾವಚಿತ್ರವನ್ನು ಊರಿನ ಬೀದಿಗಳಲ್ಲಿ ಮೆರವಣಿಗೆ ಮಾಡಿ ನಂತರ ಗ್ರಾಮಸ್ಥರಿಗೆ ಮಹಾಪ್ರಸಾದವನ್ನು ವಿನಿಯೋಗಿಸುತ್ತಿದ್ದೆವು ಮತ್ತೆ ದಿನಾಂಕ 24/03/2011 ರಲ್ಲಿ ಶ್ರೀ ಮಠವನ್ನು ಜೀರ್ಣೋಧಾರ ಮಾಡಿ ಸುತ್ತೂರು ಪೂಜ್ಯ ಶ್ರೀ ಜಗದ್ಗುರು ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಶ್ರೀ ಚಂದ್ರಶೇಖರಸ್ವಾಮಿಗಳಿಗೆ ಪಟ್ಟಾಭಿಷೇಕವನ್ನು ಮಾಡಲಾಯಿತು ಅಂದಿನಿಂದ ಮಾರ್ಚ್ ತಿಂಗಳಿನಲ್ಲಿ ಶ್ರೀ ಮಠದ ವಾರ್ಷಿಕೋತ್ಸವ ಕಾರ್ಯಕ್ರಮ , ಧರ್ನುಮಾಸ ಪೂಜಾ ಕಾರ್ಯಕ್ರಮ, ಶ್ರಾವಣ ಮಾಸದ ಪೂಜಾ ಕಾರ್ಯಕ್ರಮ, ಕಾರ್ತಿಕಮಾಸದ ಪೂಜಾ ಕಾರ್ಯಕ್ರಮ ಹಾಗೂ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರೀ ಮಠದ ವತಿಯಿಂದ ನಡೆಸಿಕೊಂಡು ಬರಲಾಗಿದೆ

ಪರಂಪರೆ:

  1. ಷ.ಬ್ರ.ಸ್ವ. ಶ್ರೀ ಚಂದ್ರಶೇಖರಸ್ವಾಮಿಗಳು

ಧಾರ್ಮಿಕ ಕಾರ್ಯಗಳು:

  • ಶ್ರೀ ಮಠದ ವಾರ್ಷಿಕೋತ್ಸವ ಕಾರ್ಯಕ್ರಮ
  • ಧರ್ನುಮಾಸ ಪೂಜಾ ಕಾರ್ಯಕ್ರಮ
  • ಶ್ರಾವಣ ಮಾಸದ ಪೂಜಾ ಕಾರ್ಯಕ್ರಮ
  • ಕಾರ್ತಿಕಮಾಸದ ಪೂಜಾ ಕಾರ್ಯಕ್ರಮ

ಸಾಮಾಜಿಕ ಕಾರ್ಯಗಳು:

  • ಶ್ರೀ ಬಸವ ಜಯಂತಿ ಕಾರ್ಯಕ್ರಮ