ವಿಳಾಸ:
ಷ.ಬ್ರ.ಸ್ವ.ಶ್ರೀ ನಟರಾಜಸ್ವಾಮಿಗಳವರು, ಶ್ರೀ ಶಂಕರದೇವರ ಮಠ, ಕುದೇರು, ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆ.ಮೊ.+919845639272
ಮಠದ ವಿವರ:
ಕುದೇರು ಗ್ರಾಮದಲ್ಲಿ ಐದು ಮಠಗಳು ಇದ್ದು, ಶಂಕರದೇವರ ಮಠವು ಪ್ರಮುಖವಾದ ಮಠವಾಗಿದೆ. ಈ ಮಠವು ಸುಮಾರು ೧೦೦ ವರ್ಷಗಳ ಇತಿಹಾಸ ಹೊಂದಿದ್ದು, ಸುತ್ತೂರು ಶಿವರಾತ್ರೀಶ್ವರ ಮಠದ ಶಾಖಾಮಠವಾಗಿರುತ್ತದೆ. ಮಠವು ಪುತ್ರವರ್ಗದ ಸಂಪ್ರದಾಯದ ಪ್ರಕಾರ ತನ್ನ ಧಾರ್ಮಿಕ ಕಾರ್ಯಚಟುವಟಿಕೆಗಳನ್ನು ಮುಂದುವರೆಸುತ್ತಿದೆ. ಶ್ರೀ ಶಂಕರದೇವರು ಈ ಮಠದ ಸಂಸ್ಥಾಪಕರು. ನಂತರ ಶ್ರೀ ಮಹಾಂತಸ್ವಾಮಿಗಳು ಹಾಗೂ ಶ್ರೀ ನಟರಾಜಸ್ವಾಮಿಗಳು ಮಠದ ಅಭಿವೃದ್ಧಿಗೆ ಪ್ರಮುಖ ಪಾತ್ರವಹಿಸಿದ್ದಾರೆ.
ಪರಂಪರೆ:
- ಷ.ಬ್ರ.ಸ್ವ.ಶ್ರೀ ಶಂಕರದೇವರು – ಮಠದ ಸ್ಥಾಪಕರು.
- ಷ.ಬ್ರ.ಸ್ವ.ಶ್ರೀ ಶಿವಬಸಪ್ಪಸ್ವಾಮಿಗಳು
- ಷ.ಬ್ರ.ಸ್ವ.ಶ್ರೀ ಪುಟ್ಟಬುದ್ಧಿಸ್ವಾಮಿಗಳು
- ಷ.ಬ್ರ.ಸ್ವ.ಶ್ರೀ ಮಲ್ಲಿಕಾರ್ಜುನಸ್ವಾಮಿಗಳು
- ಷ.ಬ್ರ.ಸ್ವ.ಶ್ರೀ ನಟರಾಜಸ್ವಾಮಿಗಳು (ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
ಬಸವಜಯಂತಿ, ಕಾರ್ತಿಕ ಮಾಸ, ಧನುರ್ಮಾಸ, ಶಿವರಾತ್ರಿಪೂಜೆ, ಲಿಂಗದೀಕ್ಷೆ, ಶ್ರೀ ಶಿವರಾತ್ರಿ ರಾಜೇಂದ್ರ ಮಹಾಸ್ವಾಮಿಗಳ ಜಯಂತಿ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ. ಶ್ರೀ ನಟರಾಜಸ್ವಾಮಿಗಳು ಸಂಸೃತ ಮತ್ತು ವೇದ ಅಧ್ಯಯನ ಮಾಡಿ, ಗುರುಪರಂಪರೆಯ ಧರ್ಮಾಚಾರ್ಯರಾಗಿದ್ದಾರೆ . ಮಠದಲ್ಲಿ ಗದ್ದುಗೆ ಪೂಜೆ, ದೇವರ ಆರಾಧನೆ ಸೇರಿದಂತೆ ಎಲ್ಲಾ ಆಚರಣೆಗಳಿದೆ.