ವಿಳಾಸ:
ಷ.ಬ್ರ.ಸ್ವ.ಶ್ರೀ ಮಹಾದೇವಸ್ವಾಮಿಗಳವರು, ಶ್ರೀ ಸಿದ್ದಮಲ್ಲೇಶ್ವರ ಪಟ್ಟದ ಮಠ, ರೇಚಂಬಳ್ಳಿ, ಕಾಗಲವಾಡಿ ಅಂಚೆ, ಚಾಮರಾಜನಗರ ತಾಲ್ಲೂಕು ಮತ್ತು ಜಿಲ್ಲೆ ಮೊ.+919611850873
ಮಠದ ಇತಿಹಾಸ:
ಈ ಭಾಗದ ಪ್ರಮುಖ ಮಠವೆಂದರೆ ಸೋಮಹಳ್ಳಿ ಶಾಖಾ ಮಠವಾದ ಶ್ರೀ ಪಟ್ಟದಮಠ. ಈ ಮಠವನ್ನು ೧೯೫೬ ರಲ್ಲಿ ಸೋಮಹಳ್ಳಿ ಮಠದ ಶ್ರೀ ಗುರುಮಲ್ಲಸ್ವಾಮಿಗಳು ಸ್ಥಾಪಿಸಿದರು. ಶ್ರೀ ಮಠವು ೧೯೫೬ ರಿಂದ ೧೯೭೧ ದವರೆಗೆ ದಾಸೋಹ ಮಠವಾಗಿತ್ತು ನಂತರ ೧೯೭೧ ರಿಂದ ಪಟ್ಟದ ಮಠವಾಗಿ ಬೆಳವಣಿಗೆ ಹೊಂದಿದೆ.
ಪರಂಪರೆ:
- ಷ.ಬ್ರ.ಸ್ವ.ಶ್ರೀ ಗುರುಮಲ್ಲಸ್ವಾಮಿಗಳು
- ಷ.ಬ್ರ.ಸ್ವ.ಶ್ರೀ ರುದ್ರಮುನಿಸ್ವಾಮಿಗಳು
- ಷ.ಬ್ರ.ಸ್ವ.ಶ್ರೀ ಮಹಾದೇವಸ್ವಾಮಿಗಳು
ಧಾರ್ಮಿಕ ಕಾರ್ಯಗಳು:
- ಕಾರ್ತಿಕ ಪೂಜೆ
- ಅಮಾವಾಸ್ಯೆ ಪೂಜೆ
- ಧನುರ್ಮಾಸ ಪೂಜೆ
- ಬಸವ ಜಯಂತಿ
- ಭಜನೆ ಕಾರ್ಯಕ್ರಮಗಳು
- ವಿವಾಹ ಮದುವೆ ಕಾರ್ಯಕ್ರಮಗಳು
- ಶಾಸನ ಪಠಣ – ಶ್ರೀವ್ಯಾಸ ಮಹಾಋಷಿ ಕುರಿತ ಶಾಸನವನ್ನು ಶ್ಲಾಘಿಸಿ, ಶರಣರ ಮಹತ್ವವನ್ನು ಸಾರುತ್ತಾರೆ
- ಪ್ರತಿ ವರ್ಷ ಅಗಸ್ಟ್ ನಂತರ ವಾರ್ಷಿಕ ಸಮ್ಮೇಳನ – ಸುತ್ತಮುತ್ತಲಿನ ಹರಗುರು ಚರ ಮೂರ್ತಿಗಳನ್ನು ಆಹ್ವಾನಿಸಿ ಆಯೋಜನೆ
ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಗಳು:
- ಭಕ್ತರಿಗೆ ಪ್ರತಿದಿನ ಪ್ರಸಾದ ವ್ಯವಸ್ಥೆ
- ೨೦೦೬: ಚಾಮರಾಜನಗರ ಜಿಲ್ಲಾ ಮಠಾಧೀಶರ ಗೋಷ್ಠಿ ಆಯೋಜನೆ
- ನಿರ್ಗತಿಕರಿಗಾಗಿ ಕುಟೀರ ಯೋಜನೆ
- ಗ್ರಾಮೀಣ ಬಡ ಮಕ್ಕಳಿಗಾಗಿ ಶಿಕ್ಷಣ ನೀಡಲು ಕಾನ್ವೆಂಟ್ ಆರಂಭಿಸುವ ಯೋಜನೆ
- ಆಧ್ಯಾತ್ಮ ಚಿಂತನೆ ಹಾಗೂ ಶರಣರ ತತ್ವಗಳ ಪ್ರಚಾರ
- ಬೇರೆ ಬೇರೆ ಭಾಗಗಳಲ್ಲಿ ಉಪನ್ಯಾಸ ಹಾಗೂ ಧಾರ್ಮಿಕ ಪ್ರವಚನ
- ಪ್ರತಿ ವರ್ಷ ಪೂರ್ವ ಗುರುಗಳ ಆರಾಧನೆ