ವಿಳಾಸ:
ನಿ.ಪ್ರ.ಸ್ವ. ಶ್ರೀ ಸಿದ್ದೇಶ್ವರಸ್ವಾಮಿಗಳು, ವಿರಕ್ತ ಮಠ, ಅರಕರೆ, ಕೆ.ಆರ್. ನಗರ ತಾಲ್ಲೂಕು, ಮೈಸೂರು ಜಿಲ್ಲೆ. ಮೊ. 7795995036 / 8073185080
ಮಠದ ವಿವರ:
ಶ್ರೀ ವಿರಕ್ತ ಮಠವು ಚೋಳರ ಕಾಲದಲ್ಲಿ ನಿರ್ಮಿತ ಅರಕೇಶ್ವರ ದೇವಸ್ಥಾನದ ಪಕ್ಕದಲ್ಲಿ ಸ್ಥಾಪನೆಯಾಗಿದೆ. ಅರಕೆರೆಯು ತಾಲ್ಲೂಕು ಕೇಂದ್ರದಿಂದ ದಕ್ಷಿಣಕ್ಕೆ 8 ಕಿಮೀ ದೂರದಲ್ಲಿದೆ. ಮಠವು ಶ್ರೀಗುರುಶಾಂತ ಸ್ವಾಮಿಗಳ ಮಾರ್ಗದರ್ಶನದಲ್ಲಿ ಆಧ್ಯಾತ್ಮಿಕ ಬೆಳವಣಿಗೆ ಕಂಡಿದ್ದು, ಇತ್ತೀಚೆಗೆ ಶ್ರೀ ಸಿದ್ದೇಶ್ವರಸ್ವಾಮಿಗಳ ನೇತೃತ್ವದಲ್ಲಿ ಮಠದ ಕಟ್ಟಡ ನವೀಕರಣಗೊಂಡಿದೆ.
ಪರಂಪರೆ:
- ನಿ.ಪ್ರ.ಸ್ವ. ಶ್ರೀ ನಂಜಯ್ಯ ಸ್ವಾಮಿಗಳು
- ನಿ.ಪ್ರ.ಸ್ವ. ಶ್ರೀ ಗುರುಶಾಂತ ಸ್ವಾಮಿಗಳು
- ನಿ.ಪ್ರ.ಸ್ವ. ಶ್ರೀ ಸಿದ್ದೇಶ್ವರಸ್ವಾಮಿಗಳು (ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
ಮಠದ ಆವರಣದಲ್ಲಿರುವ ಎರಡು ಗದ್ದುಗೆಗಳಿಗೆ ನಿತ್ಯಪೂಜೆ ನಡೆಯುತ್ತಿದ್ದು, ಮಾದೇಶ್ವರ ಮತ್ತು ಚೌಡಮ್ಮ ದೇವಾಲಯಗಳಲ್ಲಿ ಪೂಜಾ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಅಮಾವಾಸ್ಯೆ, ಹುಣ್ಣಿಮೆ, ಶ್ರಾವಣ, ಕಾರ್ತಿಕ ಮಾಸಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ಹಾಗೂ ಅನ್ನದಾನ ನೆರವೇರುತ್ತದೆ. ಹಿರಿಯ ಗುರುಗಳ ಸಂಸ್ಮರಣಾ ಕಾರ್ಯಕ್ರಮಗಳೂ ನಡೆಯುತ್ತವೆ.
ಸಾಮಾಜಿಕ ಕಾರ್ಯಗಳು: