ಶ್ರೀ ಮಲ್ಲನಮೂಲೆ ಮಠ, ಬಸವನಪುರ

ವಿಳಾಸ:

ಷ.ಬ್ರ.ಸ್ವ. ಶ್ರೀ ಚನ್ನಬಸವಸ್ವಾಮಿಗಳವರು, ಶ್ರೀ ಮಲ್ಲನಮೂಲೆ ಮಠ, ಬಸವನಪುರ, ಚಾಮಲಾಪುರ ಹುಂಡಿ (ಅಂಚೆ) , ನಂಜನಗೂಡು ತಾಲ್ಲೂಕು, ಮೈಸೂರು ಜಿಲ್ಲೆ – 571129
ಮೊ: +919945914654

ಮಠದ ವಿವರ:

ಬಸವನಪುರ ಗ್ರಾಮವು ನಂಜನಗೂಡಿನಿಂದ 3 ಕಿ.ಮೀ. ದೂರದಲ್ಲಿದ್ದು, ಮೈಸೂರು–ನಂಜನಗೂಡು ರಸ್ತೆಯಲ್ಲಿದೆ. ಕಪಿಲಾ ನದಿಯ ದಡದಲ್ಲಿ ಈ ಪುಣ್ಯ ಕ್ಷೇತ್ರವಿದೆ.

ಶ್ರೀ ಮಠವು 250 ವರ್ಷಗಳ ಹಿಂದೆ ಕಾಯಕಯೋಗಿ ಶ್ರೀ ಮಲ್ಲಯ್ಯನವರಿಂದ ಸ್ಥಾಪನೆಗೊಂಡಿದೆ. ಇವರು ಶ್ರೀ ನಿರಂಜನರ ಶಿಷ್ಯರಾಗಿದ್ದರು. ಮಠದ ನಾಮಕರಣವೂ “ಮಲ್ಲನಮೂಲೆ” ಎಂಬ ರೂಪದಲ್ಲಿ ಇವರ ಹೆಸರಿನೊಂದಿಗೆ ಸಂಪರ್ಕವಿದೆ.
ದಾಸೋಹ ಪರಂಪರೆ:
ಪ್ರತಿ ದಿನದ ಮಹಾಪ್ರಸಾದ ಸೇವೆ, ಧೂಪ-ದೀಪ, ರಾಗಿಹುರುಳಿ ತರಲು ಜನರಿಂದ ಕಾಸು ಸಂಗ್ರಹಿಸುವ ಪದ್ಧತಿ ಇತ್ತು. ಶ್ರೀ ಮಲ್ಲಯ್ಯನವರು ಶುದ್ಧ ಕಾಯಕ, ದಾಸೋಹ ಸೇವೆ ಮತ್ತು ಶಿವಪೂಜೆಯ ಮೂಲಕ ಭಕ್ತರಲ್ಲಿ ಭಕ್ತಿ ಮತ್ತು ಶ್ರದ್ಧೆ ಮೂಡಿಸುತ್ತಿದ್ದರು.
ದಳವಾಯಿ ಪ್ರಸಂಗ:
ಒಂದು ದಿನ ದಳವಾಯಿಯೊಬ್ಬ ಮಠಕ್ಕೆ ಬಂದು ಉಂಗುರವನ್ನು ನೀಡಿ ದಾಸೋಹಕ್ಕೆ ದಾನ ನೀಡಿದ ಕಥೆ, ಅವನಿಗೆ ಪ್ರಸಾದ ಸಿಕ್ಕದ ವಿಷಾದ, ಗುರುಗಳು ಹಾಗೂ ಶ್ರೀ ಮಲ್ಲಯ್ಯನವರ ಬಯಲಾದ ಘಟನೆ, ನಂತರದ ಕನಸಿನಲ್ಲಿ ಬಂದ ಗುರುಗಳ ಸೂಚನೆಯಂತೆ ಗುಡಿಯನ್ನು ಕಟ್ಟಿಸಿದನು.
ಶ್ರೀ ಕಂಬಳೇಶ್ವರ ಸಹೋದರರ ಆಗಮನ:
ಶ್ರೀ ಮಲ್ಲಯ್ಯನವರ ಬಯಲಾದ ನಂತರ, ಶ್ರೀ ಕಂಬಳೇಶ್ವರರು ತಮ್ಮ ಸಹೋದರರೊಂದಿಗೆ ಆಗಮಿಸಿ ಕ್ಷೇತ್ರದ ಪುನಶ್ಚೇತನಗೊಳಿಸಿದರು. ಅವರು ಅನುಷ್ಠಾನ, ಪವಾಡ, ಶಿವಯೋಗ, ದಾಸೋಹ ಮತ್ತು ಜ್ಞಾನದಾಸೋಹದ ಮೂಲಕ ಕ್ಷೇತ್ರದ ಖ್ಯಾತಿಯನ್ನು ಹೆಚ್ಚಿಸಿದರು.

ಪರಂಪರೆ:

  1. ಷ.ಬ್ರ.ಸ್ವ. ಶ್ರೀ ಮಲ್ಲಯ್ಯನವರು
  2. ಷ.ಬ್ರ.ಸ್ವ. ಶ್ರೀ ಕಂಬಳೇಶ್ವರರು
  3. ಷ.ಬ್ರ.ಸ್ವ. ಶ್ರೀ ಇಮ್ಮಡಿ ಕಂಬಳೇಶ್ವರರು
  4. ಷ.ಬ್ರ.ಸ್ವ. ಶ್ರೀ ಸಿದ್ದಲಿಂಗಸ್ವಾಮಿಗಳು
  5. ಷ.ಬ್ರ.ಸ್ವ. ಶ್ರೀ ಚನ್ನಬಸವ ಸ್ವಾಮಿಗಳು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು ಹಾಗೂ ಸಾಮಾಜಿಕ ಕಾರ್ಯಗಳು:

ಪಂಚಾಚಾರ, ಅಷ್ಟಾವರಣ, ಶಿಷ್ಟಾಚಾರ, ಕಾಯಕ, ಮತ್ತು ಶಿವಯೋಗದ ಮೂಲಕ ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸಿದ ಪರಂಪರೆ, ಬಸವನಪುರದ ಮಲ್ಲನ ಮೂಲೆ ಮಠವು ನಾಡಿನಲ್ಲೇ ಹೆಸರಾಂತ ಕ್ಷೇತ್ರವಾಗಿದೆ.