ವಿಳಾಸ:
ವ್ಯವಸ್ಥಾಪಕರು, ಬಂಡಹಳ್ಳಿ, ಹನೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ ಮೊ. +919449668722
ಮಠದ ವಿವರ:
ಬಂಡಹಳ್ಳಿ ಗ್ರಾಮದಲ್ಲಿ ಸ್ಥಾಪಿತವಾದ ಶ್ರೀ ಪಟ್ಟದ ಮಠವು ಸುಮಾರು 150-200 ವರ್ಷಗಳ ಇತಿಹಾಸ ಹೊಂದಿದ್ದು, ಶ್ರೀ ರಂಭಾಪುರಿ ಪೀಠದ ಶಾಖಾಮಠವಾಗಿದ್ದು, ವಂಶಪಾರಂಪರ್ಯ ಮಠವಾಗಿ ಬೆಳೆದಿದೆ. ಇದು ‘ಶಿವಾಚಾರ್ಯಮಠ’ ಮತ್ತು ‘ಸಂಸ್ಥಾನ ಮಠ’ ಎಂಬ ಹೆಸರಿನಿಂದ ಕೂಡಿದೆ. ಈ ಮಠವು ಧಾರ್ಮಿಕ, ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಪ್ರಗತಿಗೆ ಪ್ರಮುಖ ಪಾತ್ರವಹಿಸಿದೆ. ಮಠದ ಮೊದಲ ಗುರುಗಳು ಶ್ರೀ ಫಲಾಹಾರೇಶ್ವರ ಸ್ವಾಮಿಗಳು, ಪವಾಡಗಳನ್ನು ಮಾಡಿ ಜನಸಾಮಾನ್ಯರಿಗೆ ಅನುಕೂಲಗಳನ್ನು ಮಾಡಿದವರು. ಮಠದಲ್ಲಿ ಮೂರು ಗದ್ದುಗೆಗಳಿದ್ದು, ನಾಲ್ವರು ಗುರುಗಳು ಅಧಿಕಾರ ವಹಿಸಿದ್ದಾರೆ ಎಂಬ ನಂಬಿಕೆಯಿದೆ.ಷ.ಬ್ರ.ಸ್ವ. ಶ್ರೀ ಫಲಹಾರ ಪ್ರಭುಸ್ವಾಮಿಗಳವರು ದಿನಾಂಕ 15/09/2025 ರಂದು ಲಿಂಗೈಕ್ಯರಾಗಿದ್ದಾರೆ.
ಪರಂಪರೆ:
- ಷ.ಬ್ರ.ಸ್ವ. ಶ್ರೀ ಫಲಹಾರ ಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಶಿವರುದ್ರ ಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಷಡಕ್ಷರ ಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ರುದ್ರಪ್ಪ ಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಫಲಹಾರ ಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಫಲಹಾರ ಪ್ರಭುದೇವ ಸ್ವಾಮಿಗಳು
ಧಾರ್ಮಿಕ ಕಾರ್ಯಗಳು:
ಶ್ರೀಮಠದಲ್ಲಿ ಶಿವರಾತ್ರಿ, ಬಸವ ಜಯಂತಿ, ಧನುರ್ಮಾಸ ಪೂಜೆ, ಲಿಂಗದೀಕ್ಷೆ, ಶಿವದೀಕ್ಷೆ, ವಚನವಾಚನ ಮುಂತಾದ ಧಾರ್ಮಿಕ ಆಚರಣೆಗಳು ನಡೆಯುತ್ತವೆ. ಮಠದ ಗದ್ದುಗೆಗಳಿಗೆ ಅಮಾವಾಸ್ಯೆ, ಹುಣ್ಣಿಮೆ, ಕಾರ್ತೀಕ, ಶ್ರಾವಣಮಾಸಗಳಲ್ಲಿ ವಿಶೇಷ ಪೂಜೆ ಹಾಗೂ ಅನ್ನದಾಸೋಹ ನಡೆಯುತ್ತದೆ. ಶ್ರೀಗಳು ತತ್ವೋಪದೇಶ ನೀಡಿ, ಭಕ್ತರಿಗೆ ಉಚಿತ ದಾಸೋಹವನ್ನು ನಿತ್ಯ ನಡೆಸುತ್ತಿದ್ದಾರೆ.
ಸಾಮಾಜಿಕ ಕಾರ್ಯಗಳು:
ಶ್ರೀ ಫಲಾಹಾರ ಪ್ರಭುಸ್ವಾಮಿಗಳು ಶ್ರೀ ಫಲಾಹಾರ ಪ್ರಭುಸ್ವಾಮಿ ವಿದ್ಯಾಸಂಸ್ಥೆಯನ್ನು ಸ್ಥಾಪಿಸಿ ಸಂಸ್ಕೃತ ಶಾಲೆಗಳು, ನಾಲ್ಕು ಹಿರಿಯ ಪ್ರಾಥಮಿಕ ಪಾಠಶಾಲೆಗಳು ಹಾಗೂ ಅನಾಥಾಲಯಗಳನ್ನು ಪ್ರಾರಂಭಿಸಿ ಗ್ರಾಮಾಂತರ ಮಕ್ಕಳ ಶಿಕ್ಷಣಕ್ಕೆ ದಾರಿ ತೆರೆದಿದ್ದಾರೆ. ಉಚಿತ ವಿವಾಹ, ಶಿಕ್ಷಣ, ಹಾಗೂ ಎಲ್ಲ ವರ್ಗದ ಜನರ ಒಳಿತಿಗಾಗಿ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಮಠವನ್ನು ಸರ್ವಾಂಗೀಣವಾಗಿ ಅಭಿವೃದ್ದಿಪಡಿಸುತ್ತಿದ್ದಾರೆ. ನೂತನ ಮಠ ನಿರ್ಮಾಣ ಕಾರ್ಯವೂ ಪ್ರಗತಿಯಲ್ಲಿದೆ.