ಶ್ರೀ ಗುರುಮಲ್ಲೇಶ್ವರ ಪಟ್ಟದ ಮಠ, ಕಾಮಗೆರೆ

ವಿಳಾಸ:

ಷ.ಬ್ರ.ಸ್ವ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳವರು, ಶ್ರೀ ಗುರುಮಲ್ಲೇಶ್ವರ ಪಟ್ಟದ ಮಠ, ಕಾಮಗೆರೆ, ಹನೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ
ಮೊ. +919164447018

ಮಠದ ವಿವರ:

ಕಾಮಗೆರೆ – ಶ್ರೀ ಪಟ್ಟದ ಮಠ ಸ್ಥಾಪನೆಯಾಗಿ ಧಾರ್ಮಿಕ ಚಟುವಟಿಕೆಗಳ ಕೇಂದ್ರಬಿಂದು ಆಗಿದೆ. ಸುಮಾರು ೧೫೦ ವರ್ಷಗಳ ಹಿಂದೆ ಷ.ಬ್ರ.ಶ್ರೀ ಭೋಗನಂಜಪ್ಪ ಶಿವಾಚಾರ್ಯಸ್ವಾಮಿಗಳು ಮಠವನ್ನು ಸ್ಥಾಪಿಸಿದರು. ಇದು ಶ್ರೀ ಶೈಲಪೀಠದ ಶಾಖಾ ಮಠವಾಗಿದೆ. ಮಠ ಸ್ಥಾಪನೆಯದಾಗಿನಿಂದಲೂ ಧಾರ್ಮಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ.

ಪರಂಪರೆ:

  1. ಷ.ಬ್ರ.ಸ್ವ. ಶ್ರೀ ಭೋಗನಂಜಪ್ಪ ಶಿವಾಚಾರ್ಯಸ್ವಾಮಿಗಳು
  2. ಷ.ಬ್ರ.ಸ್ವ. ಶ್ರೀ ಚನ್ನಬಸಪ್ಪ ಶಿವಾಚಾರ್ಯಸ್ವಾಮಿಗಳು
  3. ಷ.ಬ್ರ.ಸ್ವ. ಶ್ರೀ ಶಾಂತಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮಿಗಳು
  4. ಷ.ಬ್ರ.ಸ್ವ. ಶ್ರೀ ನಂಜುಂಡ ಶಿವಾಚಾರ್ಯಸ್ವಾಮಿಗಳು
  5. ಷ.ಬ್ರ.ಸ್ವ. ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು (ಪ್ರಸ್ತುತ)

ಧಾರ್ಮಿಕ ಕಾರ್ಯಗಳು:

ಮಠದ ಪ್ರಾರಂಭಿಕ ಗುರುಗಳು ವಿವಿಧ ಭಾಗಗಳಲ್ಲಿ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಿದರು ಮತ್ತು ಲಿಂಗದೀಕ್ಷೆ ನೀಡಿ ವೀರಶೈವ ಧರ್ಮದ ಪ್ರಚಾರ ಮಾಡಿದರು. ಇಂದಿಗೂ ಮಠವು ಪೂಜೆ, ದಾಸೋಹ ಮತ್ತು ಜ್ಯೋತಿಷ್ಯದ ಅಧ್ಯಯನ ಮುಂತಾದ ಕಾರ್ಯಗಳಲ್ಲಿ ತೊಡಗಿದೆ.

ಸಾಮಾಜಿಕ ಕಾರ್ಯಗಳು:

ಶ್ರೀಗಳ ನೇತೃತ್ವದಲ್ಲಿ ಮಠವು ಊರಿನ ಸಹಕಾರದಿಂದ ಸಾಮಾಜಿಕ ಕೆಲಸಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ.