ವಿಳಾಸ:
ಷ.ಬ್ರ.ಸ್ವ. ಶ್ರೀ ನಂದೀಶ್ವರ ಶಿವಾಚಾರ್ಯಸ್ವಾಮಿಗಳವರು, ಶ್ರೀ ಪಟ್ಟದ ಮಠ, ಅಜ್ಜೀಪುರ, ಹನೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆಮೊ. +919902633724
ಮಠದ ವಿವರ:
ಶ್ರೀ ಪಟ್ಟದ ಮಠವು ಶ್ರೀ ರಂಭಾಪುರಿ ಪೀಠದ ಶಾಖಾಮಠವಾಗಿದ್ದು, ಹನೂರು ತಾಲ್ಲೂಕಿನ ಅಜ್ಜೀಪುರ ಗ್ರಾಮದಲ್ಲಿ ಸ್ಥಾಪಿತವಾಗಿದೆ. ಮಠವು ಶರಣ ಸಂಸ್ಕೃತಿಯ ಪ್ರಚಾರ-ಪ್ರಸಾರಕ್ಕೆ ಮತ್ತು ವೀರಶೈವ ತತ್ತ್ವದ ಬೋಧನೆಗೆ ಮುಖ್ಯ ಕೇಂದ್ರವಾಗಿದ್ದು, ಶ್ರೀ ನಿರ್ವಾಣ ಶಿವಯೋಗಿಗಳಿಂದ ಸ್ಥಾಪನೆಯಾಗಿದೆ. ಶ್ರೀಮಠವು ತನ್ನ ಧಾರ್ಮಿಕ ವಿಧಿವಿಧಾನಗಳನ್ನು ಕಾಯ್ದುಕೊಂಡು ಭಕ್ತರ ಸಹಕಾರದೊಂದಿಗೆ ನಿರಂತರ ಅಭಿವೃದ್ಧಿಯತ್ತ ಸಾಗುತ್ತಿದೆ.
ಪರಂಪರೆ:
- ಷ.ಬ್ರ.ಸ್ವ. ಶ್ರೀ ನಿರ್ವಾಣ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಜಡೆ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಉದ್ದಾನ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಗಂಗಾಧರ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ನಂದೀಶ ಶಿವಾಚಾರ್ಯಸ್ವಾಮಿಗಳು (ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
ಮಠದಲ್ಲಿ ನಿತ್ಯಪೂಜೆ, ವಿಶೇಷ ಧಾರ್ಮಿಕ ಆಚರಣೆಗಳು ಹಾಗೂ ಕಾರ್ತೀಕ, ಶ್ರಾವಣ, ಧನುರ್ಮಾಸ, ನವರಾತ್ರಿ, ಶಿವರಾತ್ರಿಯಂದು ವಿಶೇಷ ಪೂಜೆಗಳು ನಡೆಯುತ್ತವೆ. ಕಾರ್ತೀಕ ದೀಪೋತ್ಸವವೂ ಮಠದ ಪ್ರಮುಖ ಧಾರ್ಮಿಕ ಕಾರ್ಯಕ್ರಮವಾಗಿದೆ. ಗದ್ದುಗೆಗಳಿಗೆ ನಿತ್ಯಪೂಜೆ ನಡೆಯುತ್ತಿದ್ದು, ಸ್ಥಳೀಯ ಮತ್ತು ತಮಿಳುನಾಡು ಮೂಲದ ಭಕ್ತರಿಂದ ಭಾರಿ ಭಕ್ತಿ ಪ್ರದರ್ಶನವಾಗುತ್ತಿದೆ.
ಸಾಮಾಜಿಕ ಕಾರ್ಯಗಳು:
ಮಠವು “ಅಕ್ಕನ ಬಳಗ” ಮತ್ತು “ವೀರಶೈವ ಸಮಾಜ ವೇದಿಕೆ”ಗಳ ಮೂಲಕ ಸಮಾಜಸೇವೆ, ಧಾರ್ಮಿಕ ಪ್ರಜ್ಞೆ ವೃದ್ಧಿ ಮತ್ತು ಭಕ್ತರ ಸಂಘಟನೆಯ ಕೆಲಸಗಳನ್ನು ನಿರ್ವಹಿಸುತ್ತಿದೆ.