ವಿಳಾಸ:
ಷ.ಬ್ರ.ಸ್ವ. ಶ್ರೀ ಶಿವಕುಮಾರಸ್ವಾಮಿಗಳವರು, ಶ್ರೀ ಪಟ್ಟದಮಠ, ಆಲಹಳ್ಳಿ, ಕೊಳ್ಳೆಗಾಲ ತಾಲ್ಲೂಕು, ಚಾಮರಾಜನಗರ ಜಿಲ್ಲೆ – 571442 ಮೊ. +919901265667
ಮಠದ ವಿವರ:
ಆಲನಹಳ್ಳಿ ಮಠವು ಈ ಊರಿನ ಪ್ರಮುಖ ಮಠಗಳಲ್ಲಿ ಒಂದಾಗಿದ್ದು, ಪ್ರಾರಂಭದಲ್ಲಿ ಶ್ರೀ ದಾಸೋಹ ಮಠವಾಗಿ ಆರಂಭವಾಗಿ ನಂತರ ದಿನಗಳಲ್ಲಿ ಪಟ್ಟದಮಠವಾಗಿ ಪರಿವರ್ತನೆಯಾಗಿದೆ. ಸುಮಾರು ೧೦೦ ವರ್ಷಗಳ ಹಳೆಯ ಮಠವಾಗಿದ್ದು, ಗುಂಡ್ಲುಪೇಟೆ ತಾಲೂಕು ಸೋಮಹಳ್ಳಿ ಮಠದ ಶಾಖೆಯಾಗಿದೆ. ಈ ಮಠವು ಆಲಹಳ್ಳಿಯಿಂದ ಪೂರ್ವಕ್ಕೆ ಹೊರಭಾಗದಲ್ಲಿ ಸ್ಥಾಪನೆಯಾಗಿದೆ.ಮಠದ ಹಿರಿಯ ಗುರುಗಳಾದ ಶ್ರೀ ಬಸಪ್ಪಸ್ವಾಮಿಗಳ ಗದ್ದುಗೆಗೆ ಮಂಟಪವನ್ನು ನಿರ್ಮಿಸಲಾಗಿದೆ.ಜ್ಯೋತಿಷ್ಯ ಗುರು ಶ್ರೀ ನಂಜುಂಡಸ್ವಾಮಿಗಳ ಗದ್ದುಗೆಯೂ ಮಠದ ಆವರಣದಲ್ಲೇ ನಿರ್ಮಿಸಲಾಗಿದೆ.ಊರಿನ ಜನರ ಸಹಕಾರದೊಂದಿಗೆ ಅನೇಕ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ.
ಪರಂಪರೆ:
- ಷ.ಬ್ರ.ಸ್ವ. ಪಟ್ಟದ ಶ್ರೀ ಬಸಪ್ಪಸ್ವಾಮಿಗಳು.
- ಷ.ಬ್ರ.ಸ್ವ. ಶ್ರೀ ಶಿವಕುಮಾರಸ್ವಾಮಿಗಳು. (ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
ಶ್ರೀ ಶಿವಕುಮಾರಸ್ವಾಮಿಗಳ ನೇತೃತ್ವದಲ್ಲಿ ಉಚಿತ ವಿವಾಹ, ದಾಸೋಹ, ಆರಾಧನೆ, ಶಿವರಾತ್ರಿ ಜಾಗರಣೆ, ಕಾರ್ತೀಕ ಮಾಸದ ಪೂಜೆ ಮುಂತಾದ ಧಾರ್ಮಿಕ ಕಾರ್ಯಗಳು ವಿಧಿವತ್ತಾಗಿ ನಡೆಯುತ್ತಿದೆ.
ಸಾಮಾಜಿಕ ಕಾರ್ಯಗಳು:
ಬಸವ ಭವನ, ಹಿರಿಯ ಗುರುಗಳ ಮಂಟಪ, ಕಲ್ಯಾಣ ಮಂಟಪ ಮುಂತಾದ ಸಾಮಾಜಿಕ ಕಾರ್ಯಗಳನ್ನೂ ನಿರ್ವಹಿಸುತ್ತಿದ್ದಾರೆ.