ವಿಳಾಸ:
ಷ.ಬ್ರ.ಸ್ವ. ಶ್ರೀ ಸಿದ್ಧಮಲ್ಲಸ್ವಾಮಿಗಳವರು, ವೀರಸಿಂಹಾಸನ ಶಿಲಾಮಠ, ಸೋಮಹಳ್ಳಿ ಅಂಚೆ , ಗುಂಡ್ಲುಪೇಟೆ ತಾಲ್ಲೂಕು,ಚಾಮರಾಜನಗರ ಜಿಲ್ಲೆ -571109 ಮೊ. +919948253233
ಮಠದ ವಿವರ:
ಶ್ರೀ ವೀರಸಿಂಹಾಸನ ಶಿಲಾಮಠವು ಸೋಮಹಳ್ಳಿ ಗ್ರಾಮದ ಮಧ್ಯಭಾಗದಲ್ಲಿ ಸ್ಥಾಪನೆಯಾಗಿದೆ. ಈ ಮಠವು ಸುಮಾರು ೬೦೦ ವರ್ಷಗಳ ಇತಿಹಾಸವನ್ನು ಹೊಂದಿದೆ. ಈ ಮಠದ ಇತಿಹಾಸವನ್ನು ತಿಳಿಯಲು, ಸೋಮಹಳ್ಳಿಯಲ್ಲಿರುವ ಶಾಸನಗಳು ಮತ್ತು ಮುರುಳಸಿದ್ಧನ ಗುರು ಲಿಂಗ ಜಂಗಮ ಚಾರಿತ್ರ್ಯ ಎಂಬ ಗ್ರಂಥದಲ್ಲಿ ಉಲ್ಲೇಖಗಳಿವೆ. ಸೋಮಹಳ್ಳಿಯ ಬಸವನಗುಡಿಯ ಹತ್ತಿರದ ಶಾಸನದಲ್ಲಿ, ಉಮ್ಮತ್ತೂರಿನ ನಂಜರಾಜನಿಂದ ಸನ್ಮಾನಿತರಾದ ನಂಜಗೂಡಿನ ಗಂಗಾಧರೇಶ್ವರರು ಸೋಮಹಳ್ಳಿಗೆ ಬಂದು ಐಕ್ಯರಾದರು ಎಂಬ ಉಲ್ಲೇಖವಿದೆ.ಪರಂಪರೆ:
- ಷ.ಬ್ರ.ಸ್ವ. ಶ್ರೀ ಗಂಗಾಧರೇಶ್ವರ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಸಿದ್ಧಮಲ್ಲಿಕಾರ್ಜುನ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಗುರುಮಲ್ಲ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಸಿದ್ಧಮಲ್ಲ ಸ್ವಾಮಿಗಳು (ಪ್ರಸ್ತುತ)