ವಿಳಾಸ:
ಷ.ಬ್ರ.ಸ್ವ.ಶ್ರೀ ಷಡಕ್ಷರಸ್ವಾಮಿಗಳವರು, ಶ್ರೀ ಪಟ್ಟದಮಠ, ಹಂಗಳ ಅಂಚೆ , ಗುಂಡ್ಲುಪೇಟೆ ತಾಲ್ಲೂಕು, ಚಾಮರಾಜನಗರ ಜಿಲ್ಲೆ.ಮೊ. +919148303302
ಮಠದ ವಿವರ:
ಹಂಗಳದ ಪಟ್ಟದ ಮಠವು ಮೈಸೂರಿನ ದೊಡ್ಡದೇವರಾಜ ಒಡೆಯರ ಕಾಲದಲ್ಲಿ, ಸುಮಾರು 1650ರಲ್ಲಿ ಸ್ಥಾಪನೆಯಾಯಿತು. ಈ ಮಠವು ಶ್ರೀ ಶೈಲಪೀಠದ ಶಾಖಾಮಠವಾಗಿದೆ. ಮಾಗಲನಾಡು ಕೋಟೆಯ ಪಾಳೆಗಾರ ಚಿಕ್ಕದೇವರಾಜ ಒಡೆಯರಿಗೆ ಧಾರ್ಮಿಕ ಸಂಸ್ಕಾರ ನೀಡಲು, ಜಂಗಮ ಶ್ರೀ ಶಾಂತಬಸವಲಿಂಗ ಸ್ವಾಮಿಗಳ ಮಾರ್ಗದರ್ಶನದೊಂದಿಗೆ ಈ ಮಠ ನಿರ್ಮಾಣವಾಯಿತು. ನಂತರ ಮಠವನ್ನು ಹಂಗಳ ಗ್ರಾಮಕ್ಕೆ ಸ್ಥಳಾಂತರಿಸಲಾಯಿತು. ಪ್ರಸ್ತುತ, ಮಠವನ್ನು ಪುನಃಸ್ಥಾಪಿಸಿ ಧಾರ್ಮಿಕ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ.
ಪರಂಪರೆ:
- ಷ.ಬ್ರ.ಸ್ವ.ಶ್ರೀ ಶಾಂತಬಸವಲಿಂಗ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ.ಶ್ರೀ ಚನ್ನಬಸವ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ.ಶ್ರೀ ಶಾಂತವೀರ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ.ಶ್ರೀ ಷಡಕ್ಷರಸ್ವಾಮಿಗಳು (ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
ಮಠದ ಸ್ಥಾಪಕ ಗುರುಗಳ ಆರಾಧನೆ, ಶ್ರಾವಣ ಮತ್ತು ಕಾರ್ತಿಕ ಮಾಸಗಳಲ್ಲಿ ವಿಶೇಷ ಪೂಜೆಗಳನ್ನು ನಡೆಸಲಾಗುತ್ತಿದೆ. ತಮಿಳುನಾಡು ಮತ್ತು ಕೇರಳದ ಭಕ್ತರು ಸಹ ಭಾಗವಹಿಸುತ್ತಿದ್ದಾರೆ.
ಸಾಮಾಜಿಕ ಕಾರ್ಯಗಳು:
ಮಠವು ಗ್ರಾಮಸ್ಥರ ಸಹಕಾರದಿಂದ ಧಾರ್ಮಿಕ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಸನ್ಮಾರ್ಗದ ಶಿಕ್ಷಣ ಮತ್ತು ಸಂಸ್ಕಾರ ನೀಡುವಲ್ಲಿ ಮುಂದಾಗಿದೆ.