ವಿಳಾಸ:
ಷ.ಬ್ರ.ಸ್ವ. ಶ್ರೀ ಗುರುಸಿದ್ದ ಸ್ವಾಮಿಗಳವರು,ಶ್ರೀ ಪಟ್ಟದ ಮಠ, ಕಬ್ಬಹಳ್ಳಿ, ಗುಂಡ್ಲುಪೇಟೆ ತಾಲ್ಲೂಕು, ಚಾಮರಾಜನಗರ ಜಿಲ್ಲೆ ಮೊ. +919739685231 / +919964538154
ಮಠದ ವಿವರ:
ಶ್ರೀ ಮಠವು ಸುಮಾರು ೩೫೦ ವರ್ಷಗಳ ಹಿಂದೆ ಸ್ಥಾಪಿತವಾಗಿದೆ. ಇದರ ಮೂಲ ಸ್ಥಾಪಕರು ಷ.ಬ್ರ. ಶ್ರೀ ರಾಚೋಟಿ ದೇವರು (ಒಡೆಯರು) ಎಂದು ನಂಬಲಾಗಿದೆ. ಅವರು ಉತ್ತರದ ಕಡೆಯಿಂದ ಲೋಕಸಂಚಾರ ಮಾಡುತ್ತಾ ಈ ಹಳ್ಳಿಗೆ ಬಂದು, ಇಲ್ಲಿ ನೆಲೆಸಿ ದೀರ್ಘಕಾಲ ಅನುಷ್ಠಾನ ಮಾಡಿ ಮಠವನ್ನು ಸ್ಥಾಪಿಸಿದ್ದಾರೆ ಎಂಬ ನಂಬಿಕೆ ಇದೆ.
ಪರಂಪರೆ:
- ಷ.ಬ್ರ.ಸ್ವ. ಶ್ರೀ ರಾಚೋಟಿ ಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಸಿದ್ಧಲಿಂಗ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ವಿರಕ್ತ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಚನ್ನಬಸವ ಶಿವಾಚಾರ್ಯಸ್ವಾಮಿಗಳು
- ಷ.ಬ್ರ.ಸ್ವ. ಶ್ರೀ ಗುರುಸಿದ್ದ ಸ್ವಾಮಿಗಳು(ಪ್ರಸ್ತುತ)
ಧಾರ್ಮಿಕ ಕಾರ್ಯಗಳು:
ಮಠದ ಆವರಣದಲ್ಲಿರುವ ಗದ್ದುಗೆಗಳಿಗೆ ನಿತ್ಯಪೂಜೆ ನಡೆಯುತ್ತದೆ.
ಹಿರಿಯ ಗುರುಗಳ ಆರಾಧನಾ ಕಾರ್ಯಕ್ರಮವನ್ನು ಮಠಕ್ಕೆ ಸೀಮಿತಗೊಳಿಸಿ ಆಚರಿಸಲಾಗುತ್ತದೆ.
ಶ್ರಾವಣ, ಕಾರ್ತಿಕ ಹಾಗೂ ಧನುರ್ಮಾಸಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.
ಸುಮಾರು ೬೩ ವರ್ಷಗಳಿಂದ ಪೌರೋಹಿತ್ಯ, ಸಾಮೂಹಿಕ ವಿವಾಹ, ಲಿಂಗದೀಕ್ಷೆ, ಮುಂತಾದ ಧಾರ್ಮಿಕ ಕಾರ್ಯಕ್ರಮಗಳನ್ನು ನಿರ್ವಹಿಸುತ್ತಿದ್ದಾರೆ.
ಈ ಅವಧಿಯಲ್ಲಿ ಸುಮಾರು ೫೦೦ ದೇವಸ್ಥಾನಗಳ ಪ್ರತಿಷ್ಠಾಪನೆ ಮತ್ತು ೧೨೯ ಅಂಕಸ್ಥಾಪನೆಗಳನ್ನು ಮಾಡಿದ್ದಾರೆ.
ಸಾಮಾಜಿಕ ಕಾರ್ಯಗಳು:
ಶ್ರೀ ಗುರುಸಿದ್ದ ಸ್ವಾಮಿಗಳು ಸ್ವಾಮಿಗಳು ಕಬ್ಬಳ್ಳಿಯಲ್ಲಿ ಧರ್ಮಜಾಗೃತಿ ಮೂಡಿಸಿದ್ದು, ಹೆಣ್ಣು ಮಕ್ಕಳ ವಿದ್ಯಾರ್ಥಿನಿಲಯವನ್ನು ಪ್ರಾರಂಭಿಸಿದ್ದಾರೆ.
ವರ್ಣ ಭೇದವಿಲ್ಲದೆ ಎಲ್ಲ ವರ್ಗದ ಹೆಣ್ಣು ಮಕ್ಕಳಿಗೂ ಇಲ್ಲಿ ಅವಕಾಶ ನೀಡಲಾಗಿದೆ.
ಜ್ಯೋತಿಷ್ಯ ಶಾಸ್ತ್ರದ ಸಂಸ್ಕೃತಿಯನ್ನೂ ಮುಂದುವರಿಸಿದ್ದು, ಅಗತ್ಯವಿರುವವರಿಗೆ ಜ್ಯೋತಿಷ್ಯ ತಿಳಿಸುತ್ತಿದ್ದಾರೆ.